Rathna KV
@rathna_kv
788
friends
ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್ಲ ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ ನರದೇಹವಿದು ನಾನಲ್ಲ ಜರ ಮರಣಾದಿಯು ನಾನಲ್ಲ ವರ ವೈಭವ ಸಂಸಾರದ ಸವಿ ಸುಖ ಮರನಾಯಕ ನಾನಲ್ಲ ಮಾತ ಪಿತ ಸುತ ನಾನಲ್ಲ ಗುರುನಾಥನಾದವ ನಾನಲ್ಲ ಜಾತಿ ಗೋತ್ರಗಳು ನಾನಲ್ಲ ಬಹು ಪ್ರೀತಿಯ ಸತಿ ಸುತ ನಾನಲ್ಲ ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ ನಾನಾ ರೂಪವು ನಾನಲ್ಲ ನಾ ಶಿಷುನಾಳಧೀಶನ ಬಿಡಲಿಲ್ಲ ನಾ ಅಳಿಯದೆ ನಾ ತಿಳಿಯಲಾರದು ನೀ ಎಣಿಸುವ ಗುಣ ನಾನಲ್ಲ ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್ಲ ------------------------------- ಮೇಲೆ ಉಲ್ಲೇಖವಾಗಿರುವ ಸಂತ ಶ್ರೀ ಶಿಶುನಾಳ ಸಾಹೇಬರ ಗೀತೆಯ ಆಗರ್ಭ ವಿಷಯವನ್ನು ಮನದಟ್ಟು ಮಾಡಿಕೊಂಡಿದ್ದೀರಲ್ಲ ..... ಅದೇ ನಾನು ಇಂತಿ ನಿಮ್ಮ ಭಾರತರತ್ನ